ಕಳೆದ ಕೆಲವು ಸಮಯದಿಂದ ಕೊರೊನಾ ಎಂಬ ವೈರಸ್ ಜಗತ್ತಿನ ರೀತಿ ರಿವಾಜುಗಳನ್ನೇ ಬದಲಾಯಿಸಿಬಿಟ್ಟಿದೆ. ವಿದ್ಯಾರ್ಥಿಗಳು ಶಾಲೆಗೆ ಹೋಗಬೇಕಿಲ್ಲ. ಟೀಚರ್ಗಳು ಮೊಬೈಲ್ ಅಥವಾ ಕಂಪ್ಯೂಟರ್ ಮುಂದೆಕುಳಿತು ಪಾಠ ಮಾಡುತ್ತಿದ್ದಾರೆ. ದಿನಾ ಆಫೀಸ್ಗೆ ಹೋಗುತ್ತಿದ್ದ ಅಪ್ಪ/ಅಮ್ಮ ಮನೆಯಲ್ಲಿಯೇ ಕುಳಿತು ವರ್ಕ್ ಫ್ರಂ ಹೋಂ ಮಾಡುತ್ತಿದ್ದಾರೆ. ಒಂದರ್ಥದಲ್ಲಿ ಈಗ ಮನೆಯೇ ಮಂತ್ರಾಲಯ, ವಿದ್ಯಾರ್ಥಿಗಳಿಗೆ ಮನೆಯೇ ವಿದ್ಯಾಲಯ.
ಶಾಲಾ ಕಾಲೇಜುಗಳು ಮಾಡುವ ನಿಗದಿತ ಆನ್ಲೈನ್ ಕ್ಲಾಸ್ಗಳನ್ನು ತೆಗೆದುಕೊಂಡು ಕೆಲವು ವಿದ್ಯಾರ್ಥಿಗಳು ಒಂದರ್ಥದಲ್ಲಿ ಆರಾಮವಾಗಿದ್ದಾರೆ. ಒಂದಿಷ್ಟು ವಿದ್ಯಾರ್ಥಿಗಳು ಆನ್ಲೈನ್ ಕ್ಲಾಸ್ನಲ್ಲಿ ನೀಡುವ ಹೋಂವರ್ಕ್ ಹೊರೆ ನೋಡಿ ಒಮ್ಮೆ ಶಾಲೆ/ಕಾಲೇಜು ಶುರುವಾಗ್ಲಿ ಎಂದು ಬೇಡಿಕೊಳ್ಳುತ್ತಿದ್ದಾರೆ.
ಕೆಲವು ಬುದ್ಧಿವಂತ ಮಕ್ಕಳು ಮಾತ್ರ ಲಾಕ್ಡೌನ್ ಸಮಯದಲ್ಲಿ ಕಲಿಕೆಗೆ ಇರುವ ಅವಕಾಶಗಳ ಬೆನ್ನುಬಿದ್ದಿದ್ದಾರೆ.ಶಾಲೆ/ಕಾಲೇಜಿಗೆ ಹೋಗುವಾಗ ದಿನದ ಬಹುತೇಕ ಸಮಯ ಕ್ಲಾಸ್, ಪ್ರಯಾಣದಲ್ಲಿಯೇ ಮುಗಿಯುತ್ತಿತ್ತು. ಆದರೆ, ಈಗ ಮನೆಯಲ್ಲಿಯೇ ಇರುವುದರಿಂದ ಶಾಲೆ/ ಕಾಲೇಜುಗಳು ಮಾಡುವ ಆನ್ಲೈನ್ ಕ್ಲಾಸ್,ಹೋಂವರ್ಕ್ ಮುಗಿದರೂ ಸಾಕಷ್ಟು ಬಿಡುವಿನ ವೇಳೆ ಇರುವುದನ್ನು ಗುರುತಿಸಿದ್ದಾರೆ.
ಆನ್ಲೈನ್ ಎನ್ನುವುದು ಸಮುದ್ರಕ್ಕಿಂತಲೂ ವಿಶಾಲ ಎನ್ನಬಹುದು.ಇಲ್ಲಿಹುಡುಕಿದರೆ ಉಚಿತ, ವಿನಾಯಿತಿದರದ ಕೋರ್ಸ್ಗಳು ಇರುತ್ತವೆ. ಕೆಲವೊಂದು ಸರ್ಟಿಫಿಕೇಷನ್, ಉದ್ಯೋಗಾಧಾರಿತ ಕೋರ್ಸ್ ನೀಡುವ ಸಂಸ್ಥೆಗಳಲ್ಲಿ ಇರುವ ಕೋರ್ಸ್ಗಳಿಗೆ ಸೇರಿದ್ದಾರೆ. ಕೊರೊನಾ ಮುಗಿದು ಎಲ್ಲಾ ಮೊದಲಿನಂತೆ ಆಗುವ ಸಮಯದಲ್ಲಿ ಇವರ ಫೈಲ್ನಲ್ಲಿ ಹಲವು ಸರ್ಟಿಫಿಕೇಟ್ಗಳು ಸೇರಲಿವೆ. ಭವಿಷ್ಯದಲ್ಲಿ ಉದ್ಯೊಗ ಸಂದರ್ಶನಕ್ಕೆ ಹೋಗುವಾಗ ಈ ಹೆಚ್ಚುವರಿ ಸರ್ಟಿಫಿಕೇಟ್ಗಳು ಅವರೆಲ್ಲರ ರೆಸ್ಯೂಂ ತೂಕ ಹೆಚ್ಚಿಸಲಿವೆ. ಉಳಿದವರಿಗಿಂತ ಬೇಗ ಅಥವಾ ಉತ್ತಮ ಉದ್ಯೊಗ ದೊರಕಿಸಿಕೊಡಲು ಅವರಿಗೆ ನೆರವು ನೀಡಲಿವೆ.
ಲಾಕ್ಡೌನ್ ಸಮಯದಲ್ಲಿ ಬುದ್ಧಿವಂತ ವಿದ್ಯಾರ್ಥಿಗಳು ಏನು ಮಾಡಬಹುದು? ಏನೆಲ್ಲಮಾಡುತ್ತಿರಬಹುದು ಎಂಬ ಒಂದುಪಟ್ಟಿ ಸಿದ್ಧಪಡಿಸೋಣ.
- ಬೆಳಗ್ಗೆ ಬೇಗ ಎದ್ದು ವ್ಯಾಯಾಮ ಮಾಡಿ ಆರೋಗ್ಯ ಉತ್ತಮವಾಗಿಟ್ಟುಕೊಳ್ಳುತ್ತಿರಬಹುದು.
- ಸರಿಯಾದ ಹೊತ್ತಿಗೆ ಊಟ ತಿಂಡಿ ಮಾಡುತ್ತಿರಬಹುದು.
- ಅಮ್ಮನಿಗೆ ಅಡುಗೆ ಮಾಡುವಾಗ ಸಹಾಯ ಮಾಡಬಹುದು.
- ಅವಶ್ಯಕತೆ ಇದ್ದರೆ ಮಾತ್ರ ಮನೆಯಿಂದ ಹೊರಗೆ ಹೋಗಬಹುದು. ಹೋಗುವಾಗ ಮತ್ತು ಹೋಗಿ ಬಂದಮೇಲೆ ಸ್ಯಾನಿಟೈಜರ್ ಮಾಡಲು ಮರೆಯದೆ ಇರಬಹುದು.
- ಅಮ್ಮ ಮಾಡಿಕೊಡುವ ಕಷಾಯವನ್ನು ಮರುಮಾತಿಲ್ಲದೆ ಕುಡಿಯುತ್ತಿರಬಹುದು.
- ಮೊಬೈಲ್ ಫೋನ್ನಲ್ಲಿ ಗೇಮ್ಸ್, ಸೋಷಿಯಲ್ ಮೀಡಿಯಾ ಬಳಸದೆ ಇರಬಹುದು.
- ಶಾಲೆ/ಕಾಲೇಜು ನೀಡುವ ಆನ್ಲೈನ್ ಪಾಠಪ್ರವಚನದಲ್ಲಿ ಭಾಗವಹಿಸುತ್ತಿರಬಹುದು. ತಮಗೆ ಗೊತ್ತಿಲ್ಲದೆ ಇರುವ ವಿಷಯಗಳ ಬಗ್ಗೆ ಬೋಧಕರಲ್ಲಿ ಪ್ರಶ್ನಿಸುತ್ತಿರಬಹುದು.
- ಇಷ್ಟೆಲ್ಲ ಮಾಡಿದನಂತರವೂ ಉಳಿಯುವ ಹಲವು ಗಂಟೆಯನ್ನು ಹೇಗೆ ಸದುಪಯೋಗ ಮಾಡುವುದು ಎಂದು ಯೋಚಿಸುತ್ತಿರಬಹುದು.
- ಟೀವಿ ಆನ್ ಮಾಡದೆ ಇರಬಹುದು. ಸಿನಿಮಾ, ಮನರಂಜನೆ ಎಂದುಟೀವಿ ಮುಂದೆ ಸಮಯ ವ್ಯರ್ಥ ಮಾಡದೆ ಇರಬಹುದು.
- ಬಿಡುವಿನ ವೇಳೆಯಲ್ಲಿ ಏನಾದರೂ ಕೋರ್ಸ್ ಕಲಿಯಲು ಮುಂದಾಗಬಹುದು.
- ಇಂಗ್ಲಿಷ್ ಸಂವಹನ ಕೌಶಲ ಉತ್ತಮವಾಗಿಲ್ಲದೆ ಇದ್ದರೆ ಕ್ಯಾಡ್ನೆಸ್ಟ್ ಸ್ಪೋಕನ್ ಇಂಗ್ಲಿಷ್ ಆನ್ಲೈನ್ ಕೊರ್ಸ್ಗೆ ಸೇರಿರಬಹುದು.
- ಕ್ಯಾಡ್ನೆಸ್ಟ್ ಆನ್ಲೈನ್ ವೆಬ್ ಡಿಸೈನ್ ಕೋರ್ಸ್ಗೆ ಸೇರಿರಬಹುದು.
- ಕ್ಯಾಡ್ ಕೋರ್ಸ್ಗಳಿಗೆ, ಕಂಪ್ಯೂಟರ್, ಪ್ರೋಗ್ರಾಮಿಂಗ್,ಕೈಬರಹ ಮತ್ತು ಕ್ಯಾಲಿಗ್ರಾಫಿ, ಸ್ಪೋಕನ್ ಇಂಗ್ಲಿಷ್ ಮತ್ತು ವಿಎಫ್ಎಕ್ಸ್ ಮತ್ತು ಗ್ರಾಫಿಕ್ಸ್ ಕೋರ್ಸ್ಗಳನ್ನು ಆನ್ಲೈನ್ ಮೂಲಕ ಕಲಿಯುತ್ತಿರಬಹುದು.
- ಬಿಡುವು ಸಿಕ್ಕಾಗ ಯೋಗ, ಧ್ಯಾನ ಮಾಡಿ ಮನಸ್ಸನ್ನು ಮತ್ತು ಆರೋಗ್ಯವನ್ನು ಸಮತೋಲನದಲ್ಲಿ ಇಟ್ಟುಕೊಳ್ಳುತ್ತಿರಬಹುದು.
- ಎಲ್ಲಕ್ಕಿಂತ ಮುಖ್ಯವಾಗಿ ಕೊರೊನಾದ ಕುರಿತಾದ ಎಲ್ಲಾ ಮುಂಜಾಗ್ರತಾ ಕ್ರಮವನ್ನು ವಹಿಸಿಕೊಂಡು, ಕೊರೊನಾದ ಬಗ್ಗೆ ಅನಗತ್ಯಭಯ ಆತಂಕವಿಲ್ಲದೆ ಧೈರ್ಯದಿಂದ ಇರಬಹುದು.
ಅಂದಹಾಗೆ, ನೀವು ಬುದ್ಧಿವಂತ ವಿದ್ಯಾರ್ಥಿ ಅಲ್ವೆ? ನೀವು ಏನು ಮಾಡುತ್ತಿರುವಿರಿ?
ಲಾಕ್ಡೌನ್ ಸಮಯದಲ್ಲಿ ವಿನಾಯಿತಿ ದರದ ಕ್ಯಾಡ್ನೆಸ್ಟ್ ಆನ್ಲೈನ್ ಕೊರ್ಸ್ಗಳ ಬಗ್ಗೆ ಮಾಹಿತಿ ಪಡೆಯಲು ಸಂಖ್ಯೆಗೆ ವಾಟ್ಸಾಪ್ ಮಾಡಿ. ಶುಭವಾಗಲಿ.
CAD training institute in bangalore
VBA course in bangalore
CAD courses in bangalore
best web development training institute in bangalore
e commerce training courses in bangalore
web development courses in bangalore
best soft skills training institutes in bangalore
animation centers in bangalore
graphic and web design courses in bangalore
CADD NEST CADD Courses Bangalore
CADD NEST Animation Studios Bangalore
CADD NEST Computer Training Institute Bangalore
Advance Excel classes in bangalore
Tally Training Institute in bangalore
The Best Digital Marketing Training Institute In bangalore

