ಮೊದಲಿಗೆ ಕ್ಯಾಡ್ನೆಸ್ಟ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಗೆ, ಸಿಬ್ಬಂದಿಗಳಿಗೆ ಮತ್ತು ಭವಿಷ್ಯದಲ್ಲಿ ನಮ್ಮ ಸಂಸ್ಥೆಯಲ್ಲಿ ಕಲಿಯಲು ಬಯಸುವ ವಿದ್ಯಾರ್ಥಿಗಳಿಗೆ ಸೇರಿದಂತೆ ಸಮಸ್ತರಿಗೆ ಗಣೇಶ ಹಬ್ಬದ ಶುಭಾಶಯಗಳು. ಈ ಹಬ್ಬದ ಅವಧಿಯು ನಮಗೆ ತುಂಬಾ ವಿಶೇಷವಾದದ್ದು. ಕ್ಯಾಡ್ನೆಸ್ಟ್ ಆರಂಭವಾದ ವರ್ಷ ಮತ್ತು ಎರಡು ಶಾಖೆಗಳು ಹೆಚ್ಚುವರಿಯಾಗಿ ಸೇರಿ ಆರು ಕ್ಯಾಡ್ನೆಸ್ಟ್ ಶಾಖೆಗಳನ್ನು ಬೆಂಗಳೂರಿನಲ್ಲಿ ಹೊಂದಿದ್ದ ಹೆಮ್ಮೆ ನಮ್ಮದು. ಈ ಗಣೇಶ ಹಬ್ಬದ ಸಮಯದಲ್ಲಿ ಗಣೇಶನಿಂದ ಕಲಿಯಬಹುದಾದ ಅಮೂಲ್ಯ ವಿಷಯಗಳನ್ನು ಇಲ್ಲಿ ನೀಡಲಾಗಿದೆ.
ಗಣೇಶನ ದೊಡ್ಡ ತಲೆಯಿಂದ ವಿದ್ಯಾರ್ಥಿಗಳು ಏನು ಕಲಿಯಬಹುದು?
ದೊಡ್ಡ ಆನೆ ತಲೆಯಿಂದಾಗಿ ವಿನಾಯಕನಿಗೆ ಗಜಾನನ ಎಂಬ ಹೆಸರಿದೆ. ವಿದ್ಯಾರ್ಥಿಗಳೇ ನಮ್ಮೆಲ್ಲರಲ್ಲಿ ಆಲೋಚನೆಗಳು ದೊಡ್ಡದಾಗಿರಬೇಕು ಎಂದು ಈ ದೊಡ್ಡ ತಲೆ ಸಂಕೇತಿಸುತ್ತದೆ. ಆದರೆ, ನಾವೆಲ್ಲರೂ ದೊಡ್ಡದಾಗಿ ಆಲೋಚಿಸಲು ಹೆದರುತ್ತೇವೆ. ಚಿಕ್ಕಪುಟ್ಟ ಕನಸುಗಳಿಗೆ ತೃಪ್ತಿಯಾಗುತ್ತೇವೆ. ಆದರೆ, ದೊಡ್ಡದಾಗಿ ಆಲೋಚಿಸೋಣ.

ಗಣಪತಿಯ ದೊಡ್ಡ ಹೊಟ್ಟೆಯಿಂದ ಏನು ಕಲಿಯಬಹುದು?
ದೊಡ್ಡ ಹೊಟ್ಟೆ ಲಂಬೋದರ ಹೊಟ್ಟೆಯು ಇಡೀ ವಿಶ್ವವನ್ನು ಪ್ರತಿನಿಧಿಸುತ್ತದೆ. ಪುರಾಣಗಳ ಪ್ರಕಾರ, ಏಳು ಸಾಗರಗಳು ಮತ್ತು ಏಳು ಕ್ಷೇತ್ರಗಳು ಗಣೇಶನ ವಿಶ್ವ ಹೊಟ್ಟೆ ಒಳಗೆ ಇವೆ ಎನ್ನಲಾಗಿದೆ. ದೊಡ್ಡ ಹೊಟ್ಟೆಯು ಔದಾರ್ಯ ಮತ್ತು ಸಂಪೂರ್ಣ ಸ್ವೀಕಾರವನ್ನು ಪ್ರತಿನಿಧಿಸುತ್ತದೆ.
ಗಣೇಶನ ದೊಡ್ಡ ಹೊಟ್ಟೆ ನೋಡಿ ನಾವು ಕೂಡ ಹೊಟ್ಟೆ ತುಂಬಾ ತಿನ್ನೋಣ ಎಂದುಕೊಳ್ಳಬೇಡಿ. ಜೀವನದಲ್ಲಿ ನಾವು ತೆಗೆದುಕೊಂಡ ತೀರ್ಮಾನದ ಪರಿಣಾಮ ಒಳ್ಳೆಯದಾಗಬಹುದು ಅಥವಾ ಕೆಟ್ಟದಾಗಬಹುದು. ಜೀವನದಲ್ಲಿ ಪ್ರಯತ್ನ ಮುಖ್ಯ. ಯಾವುದೇ ಫಲಿತಾಂಶವನ್ನು ಜೀರ್ಣಿಸಿಕೊಳ್ಳುವ ಶಕ್ತಿ ನಮ್ಮಲ್ಲಿರಬೇಕು ಎನ್ನುವುದನ್ನು ಗಣೇಶನ ದೊಡ್ಡ ಹೊಟ್ಟೆಯಿಂದ ಕಲಿಯಬಹುದು.
ಗಣೇಶನ ಸಣ್ಣ ಕಣ್ಣುಗಳಿಂದ ಏನು ಕಲಿಯುವಿರಿ?
ಗಣೇಶನ ಕಣ್ಣುಗಳು ಸಣ್ಣವಾದರೂ ಅತ್ಯಂತ ಸೂಕ್ಷ್ಮತೆ ಮತ್ತು ಏಕಾಗ್ರತೆಗೆ ಹೆಸರುಪಡೆದಿವೆ. ಗಣೇಶನ ಸಣ್ಣ ಕಣ್ಣುಗಳು ಕಾರ್ಯಗಳನ್ನು ಪೂರ್ಣಗೊಳಿಸುವತ್ತ ಗಮನಹರಿಸಬೇಕು ಎಂದು ಸೂಚಿಸುತ್ತದೆ. ನಿರ್ಧರಿಸಿದ ಗಮನ ಮತ್ತು ಗಮನವು ಯಶಸ್ಸಿನ ಪ್ರಮುಖ ಸ್ತಂಭಗಳಾಗಿವೆ.

ಗಣಪತಿಯ ದೊಡ್ಡ ಕಿವಿಗಳು ಏನನ್ನು ಸೂಚಿಸುತ್ತವೆ?
ಉತ್ತಮ ಕೇಳುಗನಾಗುವುದು ಇಂದಿನ ಅವಶ್ಯಕತೆ. ವಿದ್ಯಾರ್ಥಿಗಳಂತೂ ಉತ್ತಮ ಕೇಳುಗರಾದರೆ ಮಾತ್ರ ಉತ್ತಮವಾಗಿ ಕಲಿಯಲು ಸಾಧ್ಯ. ವಿನಾಯಕನ ದೊಡ್ಡ ಅಗಲವಾದ ಕಿವಿಗಳು ಒಬ್ಬ ಉತ್ತಮ ಕೇಳುಗನಾಗಬೇಕೆಂದು ಸಂಕೇತಿಸುತ್ತದೆ. ಉತ್ತಮ ಭಾಷಣಕಾರನಾಗುವುದಕ್ಕಿಂತ ಉತ್ತಮ ಕೇಳುಗನಾಗುವುದು ಬಹಳ ಮುಖ್ಯ. ಲಿಸನಿಂಗ್ ಪವರ್ ಉತ್ತಮಪಡಿಸಿಕೊಳ್ಳಲು ಆದ್ಯತೆ ನೀಡಿ.
ಉದ್ದ ಸೊಂಡಿಲು ಏನು ಸೂಚಿಸುತ್ತದೆ?
ಗಣೇಶನ ಉದ್ದ ಸೊಂಡಿಲು ಸದಾ ಕ್ರಿಯಾಶೀಲನಾಗಿರು ಎಂಬ ಸಂದೇಶ ನೀಡುತ್ತದೆ. ಇದು ಎಚ್ಚರಿಕೆಯಿಂದ ಮತ್ತು ಜಾಗರೂಕತೆಯಿಂದಿರುವ ಗುಣವಾಗಿದೆ.

ಗಣೇಶನ ಮುರಿದ ದಂತ ಏನು ಸೂಚಿಸುತ್ತದೆ?
ಮುರಿದ ದಂತವು ಶಕ್ತಿಯನ್ನು ಮತ್ತು ತ್ಯಾಗ ಮಾಡುವ ಸಾಮರ್ಥ್ಯವನ್ನು ಸಂಕೇತಿಸುತ್ತದೆ. ಎರಡು ದಂತಗಳು ಮಾನವ ವ್ಯಕ್ತಿತ್ವದ ಎರಡು ಅಂಶಗಳನ್ನು ಸೂಚಿಸುತ್ತವೆ, ಒಂದು ಬುದ್ಧಿವಂತಿಕೆ ಮತ್ತು ಇನ್ನೊಂದು ಭಾವನೆ. ಗಣೇಶನ ಬಲ ದಂತವು ಬುದ್ಧಿವಂತಿಕೆಯನ್ನು ಪ್ರತಿನಿಧಿಸುತ್ತದೆ ಆದರೆ ಎಡಭಾಗವು ಭಾವನೆಯನ್ನು ಪ್ರತಿನಿಧಿಸುತ್ತದೆ.
ವಿದ್ಯಾರ್ಥಿಗಳೇ, ಈಗ ಶಾಲಾ ಕಾಲೇಜುಗಳಲ್ಲಿ ಕಲಿತ ಶಿಕ್ಷಣವಷ್ಟೇ ನಿಮ್ಮ ಭವಿಷ್ಯದ ಉದ್ಯೋಗಕ್ಕೆ ಸಾಕಾಗದು. ವಿವಿಧ ಉದ್ಯೋಗಾಧರಿತ ಕೌಶಲ್ಯಗಳನ್ನು ನಿಮ್ಮದಾಗಿಸಿಕೊಳ್ಳಬೇಕು. ಹತ್ತು ಹಲವು ಸ್ಕಿಲ್ಗಳನ್ನು ಕಲಿತು ಸರ್ಟಿಫಿಕೇಟ್ಗಳನ್ನು ಪಡೆದುಕೊಂಡರೆ ನಿಮ್ಮ ರೆಸ್ಯೂಂ ಇತರರಿಗಿಂತ ಹಲವು ಮೈಲು ಮುಂದಿರುತ್ತದೆ. ನಿಮಗೆ ಉದ್ಯೋಗ ದೊರಕುವ ಸಾಧ್ಯತೆ ಅಧಿಕವಾಗಿರುತ್ತದೆ.
ಕ್ಯಾಡ್ನೆಸ್ಟ್ ಶಿಕ್ಷಣ ಸಂಸ್ಥೆಗಳನ್ನು ಸಂಪರ್ಕಿಸಲು ಇಲ್ಲಿ ಕ್ಲಿಕ್ ಮಾಡಿ.


