ಇಂಗ್ಲಿಷ್ನಲ್ಲಿ ಇರುವುದು 26 ಅಕ್ಷರವಾದರೂ ಅದರಿಂದ ಸೃಷ್ಟಿಯಾದ ಕೋಟಿ ಕೋಟಿ ಪದಗಳು ಬೆರಗು ಹುಟ್ಟಿಸುವಂತದ್ದು. ಸರ್ವವ್ಯಾಪಿಯಾಗಿರುವ ಇಂಗ್ಲಿಷ್ ಈಗ ಅವಶ್ಯಕ ಸಂವಹನ ಮಾಧ್ಯಮ. ಉದ್ಯೋಗ ದೃಷ್ಟಿಯಿಂದ ಇಂಗ್ಲಿಷ್ ಕಲಿಕೆಯಂತೂ ಅನಿವಾರ್ಯ ಎಂದಾಗಿದೆ.
ರಾಜ್ಯದ ವಿದ್ಯಾರ್ಥಿಗಳು ಅದರಲ್ಲಿಯೂ ಗ್ರಾಮೀಣ ವಿದ್ಯಾರ್ಥಿಗಳು ಇಂಗ್ಲಿಷ್ ಅನ್ನು ಒಂದು ವಿಷಯವಾಗಿ ಓದುವುದು ಹೆಚ್ಚು. ಆದರೆ, ಮನೆಯಲ್ಲಿ ಅಥವಾ ಕಾಲೇಜಿನಲ್ಲಿ ಹೆಚ್ಚಾಗಿ ಕನ್ನಡ ಅಥವಾ ಮಾತೃಭಾಷೆಯಲ್ಲಿಯೇ ಸಂವಹನ ಮಾಡುತ್ತಾರೆ. ಕಾಲೇಜು ಅಥವಾ ಮನೆಯಲ್ಲಿರುವಾಗ ಸಮಸ್ಯೆಯಾಗುವುದಿಲ್ಲ. ಓದು ಮುಗಿಸಿದ ಬಳಿಕ ಉದ್ಯೊಗ ಸಂದರ್ಶನಕ್ಕೆ ಹೋದಾಗ ಅಥವಾ ಯಾವುದಾದರೂ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವಾಗ ಇಂಗ್ಲಿಷ್ ಭೂತವಾಗಿ ಕಾಡುತ್ತದೆ.
ಈ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಗೊತ್ತಿಲ್ಲ ಎಂದಲ್ಲ. ಇಂಗ್ಲಿಷ್ ಪರೀಕ್ಷೆಯಲ್ಲಿ ಅತ್ಯುತ್ತಮವಾಗಿಯೇ ಅಂಕ ಪಡೆದಿರುತ್ತಾರೆ. ಆದರೆ, ಯಾರಲ್ಲಿಯಾದರೂ ಇಂಗ್ಲಿಷ್ನಲ್ಲಿ ಮಾತನಾಡುವಾಗ ತಡಬಡಿಸುತ್ತಾರೆ. ಮನಸ್ಸಿನಲ್ಲಿ ಹೇಳಬೇಕೆನಿಸುವ ಸಾಕಷ್ಟು ಪದಗಳು ಇರುತ್ತವೆ. ಸಂದರ್ಶಕರಿಗೆ ಹೇಳಬೇಕಾದ ಮಾತುಗಳೆಲ್ಲವೂ ಇಂಗ್ಲಿಷ್ ಸಂವಹನ ಕೌಶಲವಿಲ್ಲದೆ ಇರುವುದರಿಂದ ಬಾಯಲ್ಲಿಯೇ ಉಳಿದು ಹೋಗುತ್ತದೆ.
ನಮ್ಮ ಕ್ಯಾಡ್ನೆಸ್ಟ್ ಬಸವನಗುಡಿ ಶಾಖೆಗೆ ಕೋಲಾರದ ವಿದ್ಯಾರ್ಥಿನಿಯೊಬ್ಬರು ಬಂದಿದ್ದರು. ಆಕೆ ಎಸ್ಎಸ್ಎಲ್ಸಿಯಲ್ಲಿ ಡಿಸ್ಟಿಕ್ಷನ್ ಸ್ಟುಡೆಂಟ್. ಪಿಯುಸಿಯಲ್ಲಿಯೂ ಉತ್ತಮ ಅಂಕ ಪಡೆದಿದ್ದರು. ಆದರೆ, ಉದ್ಯೋಗಕ್ಕಾಗಿ ಬೆಂಗಳೂರಿಗೆ ಬಂದಾಗ ಅವರಿಗೆ ಇಂಗ್ಲಿಷ್ನ ಮಹಿಮೆ ಗೊತ್ತಾಗಿದ್ದು. ಸಂವಹನ ಮಾಧ್ಯಮವಾಗಿ ಕನ್ನಡವನ್ನೇ ಅವಲಂಬಿಸಿದ್ದ ಅವರಿಗೆ ಇಂಗ್ಲಿಷ್ನಲ್ಲಿ ಸರಿಯಾಗಿ ಮಾತನಾಡಲು ತಿಳಿಯದೆ ಇದ್ದುದ್ದರಿಂದ ಒಳ್ಳೊಳ್ಳೆಯ ಉದ್ಯೋಗಾವಕಾಶ ತಪ್ಪಿ ಹೋಗಿತ್ತು. ಇಂತಹ ಸಮಯದಲ್ಲಿ ಆಕೆಯ ಸ್ನೇಹಿತೆಯೊಬ್ಬರು ಕ್ಯಾಡ್ನೆಸ್ಟ್ ಸ್ಪೋಕನ್ ಇಂಗ್ಲಿಷ್ ಕೋರ್ಸ್ಗಳ ಮಾಹಿತಿ ನೀಡಿದ್ದರು.
ಪಿಜಿಯಲ್ಲಿದ್ದುಕೊಂಡು, ಯಾವುದೋ ಶೋರೂಂನಲ್ಲಿ ಕೆಲಸ ಮಾಡುತ್ತ ಬಿಡುವಿನ ವೇಳೆಯಲ್ಲಿ ನಮ್ಮ ಕ್ಯಾಡ್ನೆಸ್ಟ್ ಬಸವನಗುಡಿ ಅಕಾಡೆಮಿಗೆ ಬರುತ್ತಿದ್ದರು. ಆ ಹುಡುಗಿ ತುಂಬಾ ಜಾಣೆ. ಕ್ಲಾಸ್ನಲ್ಲಿ ಹೇಳಿಕೊಟ್ಟದ್ದನ್ನೆಲ್ಲ ತುಂಬಾ ಶ್ರದ್ಧೆಯಿಂದ ಕಲಿಯುತ್ತಿದ್ದಳು. ಅವಳ ಈಗಿನ ಸಂವಹನ ಕೌಶಲ ನೋಡಿದರೆ ಎಲ್ಲರೂ ಬೆರಗಾಗುತ್ತಾರೆ. ಬಳಿಕ ಬೇರೆ ಉತ್ತಮ ಕೆಲಸ ದೊರಕಿಸಿಕೊಂಡರು. ಬಳಿಕ ಪದವಿಯನ್ನೂ ಮುಗಿಸಿ ಪ್ರತಿಷ್ಠಿತ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ನಮ್ಮ ಕ್ಯಾಡ್ನೆಸ್ಟ್ನಲ್ಲಿ ಇಂತಹ ಹಲವು ಸಕ್ಸಸ್ ಸ್ಟೋರಿಗಳು ಇವೆ.
ಪಠ್ಯ ಜ್ಞಾನ ಸಾಕಾಗದು
ಈಗಿನ ಉದ್ಯೊಗ ಜಗತ್ತು ಕೇವಲ ನಿಮ್ಮ ಅಂಕಗಳನ್ನು ಮಾತ್ರ ನೋಡುವುದಿಲ್ಲ. ನಿಮ್ಮ ವ್ಯಕ್ತಿತ್ವ, ಸಂವಹನ ಕೌಶಲ, ಟೆಕ್ ಸ್ಕಿಲ್ಸ್, ಸಾಫ್ಟ್ ಸ್ಕಿಲ್ಸ್ ಇತ್ಯಾದಿಗಳನ್ನು ನೋಡುತ್ತದೆ. ನೀವು ಯಾವುದಾದರೂ ಉದ್ಯೊಗ ಸಂದರ್ಶನಕ್ಕೆ ಹೋದಾಗ ಕೆಲವೇ ಸೆಕೆಂಡ್ನಲ್ಲಿ ಫಸ್ಟ್ ಇಂಪ್ರೆಷನ್ ಉಂಟು ಮಾಡಬೇಕು. ನಿಮ್ಮಲ್ಲಿ ಅತ್ಯುತ್ತಮ ಇಂಗ್ಲಿಷ್ ಸಂವಹನ ಕೌಶಲವಿದ್ದರೆ, ಆತ್ಮವಿಶ್ವಾಸವಿದ್ದರೆ ನೀವಾಡುವ ಮಾತುಗಳು ಉದ್ಯೋಗದಾತರಿಗೆ ಭರವಸೆ ಹುಟ್ಟಿಸುತ್ತದೆ. ನಿಮ್ಮನ್ನು ನೇಮಕ ಮಾಡಿಕೊಳ್ಳುತ್ತಾರೆ.
ಭಯಬಿಡಿ, ಕಲಿಕೆ ನಿರಂತರವಾಗಿರಲಿ
ಭಯಪಟ್ಟರೆ ಹುಲ್ಲುಕಡ್ಡಿಯನ್ನೂ ಎತ್ತಲು ನಿಮ್ಮಿಂದ ಸಾಧ್ಯವಿಲ್ಲ. ಮೊದಲಿಗೆ ಇಂಗ್ಲಿಷ್ ಬಗ್ಗೆ ನಿಮಗಿರುವ ಭಯವನ್ನು ಹೋಗಲಾಡಿಸಿ. ನಾನು ಕಲಿಯಬಲ್ಲೆ, ಇಂಗ್ಲಿಷ್ನಲ್ಲಿ ನಿರರ್ಗಳವಾಗಿ ಮಾತನಾಡಬಲ್ಲೆ ಎಂಬ ಭರವಸೆ ಆತ್ಮವಿಶ್ವಾಸ ಬೆಳೆಸಿಕೊಳ್ಳಿ
ನಿಮ್ಮ ಸ್ನೇಹಿತರ ಜೊತೆ ಮಾತನಾಡಿ
ಇಂಗ್ಲಿಷ್ ಕಲಿಕೆಯಲ್ಲಿ ಆಸಕ್ತಿಯುಳ್ಳವರನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳಿ.ಅವರಲ್ಲಿ ಆದಷ್ಟು ಇಂಗ್ಲಿಷ್ನಲ್ಲಿಯೇ ಮಾತನಾಡಿ. ನೆನಪಿಡಿ, ನೀವು ಯಾರ ಸ್ನೇಹ ಮಾಡುವಿರೋ ಅವರ ಪ್ರಭಾವ ನಿಮ್ಮ ಮೇಲೆ ಇರುತ್ತದೆ.
ನಿಮ್ಮ ದೌರ್ಬಲ್ಯ ಅರ್ಥಮಾಡಿಕೊಳ್ಳಿ
ಎಲ್ಲರಲ್ಲಿಯೂ ವೀಕ್ನೆಸ್ ಇದ್ದೇ ಇರುತ್ತದೆ. ಇಂಗ್ಲಿಷ್ ವಿಷಯದಲ್ಲಿ ನಿಮ್ಮ ದೌರ್ಬಲ್ಯವೇನು ಎಂದು ತಿಳಿದುಕೊಳ್ಳಿ. ನಿಮಗೆ ವ್ಯಾಕರಣ ಗೊತ್ತಿಲ್ಲದಿದ್ದರೆ ಗ್ರಾಮರ್ ಬಗ್ಗೆ ಫೋಕಸ್ ಮಾಡಿ. ಮಾತನಾಡುವ ಭಯ ಅಥವಾ ಸ್ಟೇಜ್ ಫಿಯರ್ ಇದ್ದರೆ ಧೈರ್ಯದಿಂದ ಮಾತನಾಡಲು ಪ್ರಯತ್ನಿಸಿ.
ಕೇಳಲು ಕಲಿಯಿರಿ
ಇಂಗ್ಲಿಷ್ ಮಾತನಾಡಲು ನಿಮಗೆ ತಿಳಿಯಬೇಕಿದ್ದರೆ ಮೊದಲು ನೀವು ಇಂಗ್ಲಿಷ್ ಮಾತನಾಡುವವರ ಮಾತುಗಳನ್ನು ಕೇಳಬೇಕು. ಟೀವಿ ಅಥವಾ ಇಂಟರ್ನೆಟ್ನಲ್ಲಿ ಇಂಗ್ಲಿಷ್ ಭಾಷಣಗಳನ್ನು ಕೇಳಿರಿ. ಇಂಗ್ಲಿಷ್ ಸಿನಿಮಾಗಳ ಸಬ್ಟೈಟಲ್ಗಳನ್ನು ಓದುತ್ತ ಇರಿ. ಉಳಿದವರು ಹೇಗೆ ಇಂಗ್ಲಿಷ್ ಮಾತನಾಡುತ್ತಾರೆ ಎಂದು ಆಲಿಸಿರಿ.
ಇಂಗ್ಲಿಷ್ ದಿನಪತ್ರಿಕೆಗಳನ್ನುಓದಿ
ನಿಮ್ಮಲ್ಲಿ ಪದ ಸಂಪತ್ತು ಹೆಚ್ಚಾದರೆ ಇಂಗ್ಲಿಷ್ ಸಂವಹನ ಹೆಚ್ಚು ಮೌಲ್ಯಯುತವಾಗತ್ತದೆ. ಇದಕ್ಕಾಗಿ ಇಂಗ್ಲಿಷ್ ಪತ್ರಿಕೆಗಳನ್ನು ಓದಿ. ಗೊತ್ತಾಗದ ಪದಗಳನ್ನು ಡಿಕ್ಷನರಿಯಲ್ಲಿ ನೋಡಿ ಅದರ ಅರ್ಥ ತಿಳಿದುಕೊಳ್ಳಿ. ಸಾಧ್ಯವಾದರೆ ಇಂಗ್ಲಿಷ್ ಮತ್ತು ಕನ್ನಡ ಪತ್ರಿಕೆಯನ್ನು ಅಕ್ಕಪಕ್ಕದಲ್ಲಿಟ್ಟುಕೊಂಡು ಅಲ್ಲಿ ಬಂದಿರುವ ಒಂದೇ ಸುದ್ದಿಯನ್ನು ತುಲನೆ ಮಾಡಿ. ಇಂಗ್ಲಿಷ್ ಕಾದಂಬರಿಗಳನ್ನು ಓದಿರಿ. ಚೇತನ್ ಭಗತ್ ಸೇರಿದಂತೆ ಹಲವು ಕಾದಂಬರಿಗಾರರ ಇಂಗ್ಲಿಷ್ ತುಂಬಾ ಸರಳವಾಗಿರುತ್ತದೆ.
ಕನ್ನಡಿ ಜೊತೆ ಮಾತನಾಡಿ
ಇಂಗ್ಲಿಷ್ ಸಂವಹನವೆಂದರೆ ಕೇವಲ ವಾಕ್ಯಗಳನ್ನು ಹೇಳುವುದಲ್ಲ. ನಿಮ್ಮ ಮುಖದ ಭಾವನೆ, ಧ್ವನಿಯ ಏರಿಳಿತ ಇತ್ಯಾದಿಗಳು ಮುಖ್ಯವಾಗಿರುತ್ತವೆ. ಇದಕ್ಕಾಗಿ ನೀವು ಕನ್ನಡಿ ಮುಂದೆ ನಿಂತು ಇಂಗ್ಲಿಷ್ ಮಾತನಾಡುವುದನ್ನು ಪ್ರ್ಯಾಕ್ಟೀಸ್ ಮಾಡಿ.
ತಪ್ಪು ಮಾತನಾಡುತ್ತೇನೆ ಎಂಬ ಭಯ ಬೇಡ
ಯಾರಲ್ಲಿಯಾದರೂ ಇಂಗ್ಲಿಷ್ನಲ್ಲಿ ಸಂವಹನ ಮಾಡುವಾಗ ತಪ್ಪಾಗಿ ಮಾತನಾಡಿದರೆ ಏನಂದುಕೊಳ್ಳುತ್ತಾರೋ ಎಂದುಕೊಳ್ಳಬೇಡಿ. ನಿಮಗೆ ಗೊತ್ತಿರುವ ಬಟ್ಲರ್ ಇಂಗ್ಲಿಷ್ನಲ್ಲಿಯೇ ಮಾತನಾಡಿ. ದಿನಕಳೆದಂತೆ ನಿಮ್ಮ ಇಂಗ್ಲಿಷ್ ಸುಧಾರಿಸುತ್ತದೆ.
ಬೇಸಿಕ್ ಸಂವಹನ ಕಲಿಯಿರಿ
ಸಂದರ್ಶಕರ ಜೊತೆ ಹೇಗೆ ಮಾತನಾಡಬೇಕು, ಸ್ನೇಹಿತರ ಜೊತೆ ಹೇಗೆ ಮಾತನಾಡಬೇಕು, ಕಸ್ಟಮರ್ ಕೇರ್ ಜೊತೆ ಹೇಗೆ ಮಾತನಾಡಬೇಕು… ತಿಳಿದುಕೊಳ್ಳಿ. ದಿನನಿತ್ಯ ನೀವು ಇಂಗ್ಲಿಷ್ನಲ್ಲಿ ಮಾತನಾಡಬಹುದಾದ ಸರಳ ಪದಗಳನ್ನು, ವಾಕ್ಯಗಳನ್ನು ಕಲಿಯಿರಿ. ಉದಾಹರಣೆಗೆ: ಥ್ಯಾಂಕ್ಸ್, ವೆಲ್ಕಂ, ಹ್ಯಾಡ್ ಯುವರ್ ಡಿನ್ನರ್ ಇತ್ಯಾದಿ.
ಈಗ ಆನ್ಲೈನ್ ಮೂಲಕವೂ ಸ್ಪೋಕನ್ ಇಂಗ್ಲಿಷ್ ಕಲಿಯಬಹುದು. ಆನ್ಲೈನ್ ಅಥವಾ ಆಫ್ಲೈನ್ ಕೋರ್ಸ್ಗಳ ಮಾಹಿತಿ ಪಡೆಯಲು ಈಗಲೇ ನಮ್ಮ ಕ್ಯಾಡ್ನೆಸ್ಟ್ ಶಾಖೆಗಳಿಳನ್ನು ಸಂಪರ್ಕಿಸಿ ಅಥವಾ 9035333733 ಸಂಖ್ಯೆಗೆ ವಾಟ್ಸಪ್ ಮಾಡಿ.

